Current Date 25 Aug, 2026

ಸಿಂಪಲ್ ಸುನಿ ಹೊಸ ಸಿನಿಮಾ! ಟೈಟಲ್ ಗೆಸ್ ಮಾಡಲು ಜನರಿಗೆ ಬಿಟ್ಟ ಡೈರೆಕ್ಟರ್!

ಸಿಂಪಲ್ ಸುನಿ (Simple Suni) ಮತ್ತೊಂದು ಚಿತ್ರ ಮಾಡೋಕೆ ರೆಡಿ ಆಗಿದ್ದಾರೆ. ಈ ಚಿತ್ರಕ್ಕೆ ಇನ್ನು ಟೈಟಲ್ ಇಟ್ಟಿಲ್ಲ. ಆದರೆ, ಪೋಸ್ಟರ್ ನೋಡಿ. ಟೈಟಲ್ ಗೆಸ್ ಮಾಡಿ. ನನ್ನನ್ನೇ ಗೆಲ್ಲಿ ಅಂತಲೂ ತಮಾಷೆ ಕೂಡ ಮಾಡಿದ್ದಾರೆ. ಸಿಂಪಲ್ ಸುನಿ ಒಳ್ಳೆ ಕಥೆ ಮಾಡಿರುತ್ತಾರೆ. ಒಂದು ಸರಳ ಪ್ರೇಮಕಥೆ ಚೆನ್ನಾಗಿತ್ತು. ವೀರ ಸಮರ್ಥ ಸಂಗೀತದ ಹಾಡುಗಳೂ ಸೂಪರ್ ಫೀಲ್ ಕೊಟ್ಟಿದ್ದವು. ಈ ಚಿತ್ರವನ್ನ ರಾಮ್ ಮೂವೀಸ್ ಪ್ರೊಡಕ್ಷನ್ ನಿರ್ಮಾಣ ಮಾಡಿತ್ತು. ಇದೀಗ ಇದೇ ಸಂಸ್ಥೆಗಾಗಿಯೇ ಸಿಂಪಲ್ ಸುನಿ 2ನೇ ಸಿನಿಮಾ ಮಾಡ್ತಿದ್ದಾರೆ.